ಸಬ್ ಇನ್ಸ್ ಪೆಕ್ಟರ್ ಮೇಲೆ ಥಳಿತದ ಚಿತ್ರ 
ದೇಶ

ಮೀರತ್: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಬಿಜೆಪಿ ಕೌನ್ಸಿಲರ್; ವಿಡಿಯೋ ವೈರಲ್

ಉತ್ತರ ಪ್ರದೇಶದ ಮೀರತ್ ನಲ್ಲಿ ಬಿಜೆಪಿ ಪಾಲಿಕೆ ಸದಸ್ಯರ ಅಟ್ಟಹಾಸ ಮೆರೆ ಮೀರಿದೆ. ಖಾಕಿ ಸಮವಸ್ತ್ರದಲ್ಲಿದ್ದ ಇನ್ಸ್ ಪೆಕ್ಟರ್ ಮೇಲೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೀರತ್ : ಉತ್ತರ ಪ್ರದೇಶದ ಮೀರತ್ ನಲ್ಲಿ ಬಿಜೆಪಿ ಪಾಲಿಕೆ ಸದಸ್ಯರ ಅಟ್ಟಹಾಸ ಮೆರೆ  ಮೀರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆ ಎಳ್ಳಷ್ಟೂ ಗೌರವ ಇಲ್ಲದಂತಾಗಿದೆ.  ಖಾಕಿ ಸಮವಸ್ತ್ರದಲ್ಲಿದ್ದ ಇನ್ಸ್ ಪೆಕ್ಟರ್ ಮೇಲೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಈ ವಿಡಿಯೋ ಇದೀಗ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳಾ ವಕೀಲೆಯೊಂದಿಗೆ ಹೋಟೆಲ್ ಗೆ ಬಂದಿದ್ಧ ಸಬ್ ಇನ್ಸ್ ಪೆಕ್ಟರ್  ನನ್ನು ಅವಾಚ್ಯ ಶಬ್ದಗಳಿಂದ ಬಿಜೆಪಿ ಪಾಲಿಕೆ ಸದಸ್ಯ ಮನೀಷ್ ನಿಂದಿಸಿದ್ದಾನೆ. ನಂತರ ತಾವೂಬ್ಬ ಜನಪ್ರತಿನಿಧಿಯಾಗಿದ್ದರೂ ಖಾಕಿ ಸಮವಸ್ತ್ರಕ್ಕೂ ಬೆಲೆ ಕೊಡದೆ ಕೈಯಿಂದ ಹಲ್ಲೆ ನಡೆಸಿದ್ದಾನೆ.

ಸಬ್ ಇನ್ಸ್ ಪೆಕ್ಟರ್ ಕೆಳಗೆ ಬಿದ್ದರೂ ಬಿಡದ ಮನೀಷ್ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಂತರ ಆರೋಪಿ ಮನೀಷ್ ನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

'ಜಸ್ಪ್ರೀತ್ ಬುಮ್ರಾ ನನ್ನಿಂದ ನಿಧಾನಗತಿಯ ಬೌಲಿಂಗ್ ಕಲಿತರು': ಚರ್ಚೆಗೆ ಗ್ರಾಸವಾದ ಪಾಕ್ ಮೂಲದ ವೇಗಿಯ ಹೇಳಿಕೆ!

ಬೆಂಗಳೂರು: ಹಾಡಹಗಲೇ ಕೊಲೆ ಆರೋಪಿ ಮೇಲೆ ಮಾರಣಾಂತಿಕ ದಾಳಿ, 68 ಬಾರಿ ಮಚ್ಚೇಟು, ಕುಣಿದು ಕುಪ್ಪಳಿಸಿದ ದುಷ್ಕರ್ಮಿಗಳು!

ನನಗೆ ಅನ್ಯಾಯವಾಗಿದೆ: BJP ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ ರಾಜೀನಾಮೆ!

ರಣಾಂಗಣದಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗಿರಬಹುದು, ಆದರೆ ಇಸ್ರೇಲಿಗಲ್ಲ! (ತೆರೆದ ಕಿಟಕಿ)

SCROLL FOR NEXT